ಬಾಲಿವುಡ್ ಇತಿಹಾಸದಲ್ಲಿ ಚಲನಚಿತ್ರ ನಿರ್ಮಾಪಕರ ಸಂಖ್ಯೆ ತುಸು ಹೆಚ್ಚೇ ಇದೆ. ಅನೇಕ ನಿರ್ಮಾಪಕರ ಚಿತ್ರಗಳು ನೇರವಾಗಿ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿವೆ. ಇಂದು ನಾವು ಬಾಲಿವುಡ್‌ನಲ್ಲಿ ದೊಡ್ಡ ಮತ್ತು ವಿಶೇಷವಾದ ಗುರುತನ್ನು ಹೊಂದಿರುವ ಅಂತಹ ನಿರ್ದೇಶಕ-ನಿರ್ಮಾಪಕರನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
ನೀವು ಈ ಫೋಟೋದಲ್ಲಿರುವ ಮಗುವನ್ನು ನೋಡುತ್ತಿರಬೇಕು. ಬಹುಶಃ ನೀವು ಈ ಮಗುವನ್ನು ಗುರುತಿಸದೇ ಇರಬಹುದು, ಆದರೆ ಈ ಮಗು ಇಂದು ಬಾಲಿವುಡ್‌ನ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ಮಾಪಕ. ಅನೇಕ ಸೆಲೆಬ್ರಿಟಿಗಳನ್ನು ಸ್ಟಾರ್‌ಗಳನ್ನಾಗಿ ಮಾಡಿದ್ದಾರೆ ಈ ನಿರ್ಮಾಪಕ. ಇಂದು ನಿರ್ಮಾಪಕರ ಬಳಿ ಅಪಾರ ಸಂಪತ್ತಿದೆಯಾದರೂ, ಹಿಂದೆ ಅವರ ಮನೆಯನ್ನು ಕೂಡ ಮಾರಿ ಜೀವನ ಸಾಗಿಸುತ್ತಿದ್ದರು. ಇವರ ತಾಯಿ ತನ್ನ ಒಡವೆಗಳನ್ನೂ ಮಾರಿದ್ದರು. ಬನ್ನಿ ಅವರು ಯಾರೆಂದು ತಿಳಿಯೋಣ.
Read Also: ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…
ಫೋಟೋದಲ್ಲಿ ಕಾಣುತ್ತಿರುವ ಮಗು ಬೇರೆ ಯಾರೂ ಅಲ್ಲ, ಕರಣ್ ಜೋಹರ್. ಕರಣ್ ಹೆಸರು ಕೇಳಿದ ಕೂಡಲೇ ನಿಮಗೆ ಅವರ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ ಬಿಡಿ... ಕರಣ್ ಅನೇಕ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಕರಣ್ ತಂದೆ ಯಶ್ ಕೂಡ ಹಿರಿಯ ನಿರ್ಮಾಪಕರು. ಅವರು ಧರ್ಮ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಕರಣ್ ಇಂದು ಅದನ್ನು ನಿರ್ವಹಿಸುತ್ತಿದ್ದಾರೆ.
ಮನೆಯನ್ನು ಮಾರಿದ್ದರು…
ಕರಣ್ ಜೋಹರ್ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ದೊಡ್ಡ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ತಂದೆಯ ಚಿತ್ರಗಳು ಸೋತ ನಂತರ ಅವರ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು ಎಂದು ಅವರು ಹೇಳಿದರು. ಆಗ ಅವರ ತಾಯಿ ತನ್ನ ಅಜ್ಜಿಯ ಮನೆಯನ್ನು ಮಾರಿದ್ದರು. ಬಳಿಕ ಕರಣ್ ತಂದೆಯ ಆಸ್ತಿಯನ್ನೂ ಮಾರಾಟ ಮಾಡಲಾಗಿತ್ತು.
ಕರಣ್ ಜೋಹರ್ ಅವರ ತಂದೆ ಧರ್ಮ ಪ್ರೊಡಕ್ಷನ್ಸ್ ಮೂಲಕ ತಮ್ಮ ಮೊದಲ ಚಿತ್ರ ‘ದೋಸ್ತಾನಾ‘ ಮಾಡಿದರು. 1980 ರಲ್ಲಿ ಬಿಡುಗಡೆಯಾದ ಈ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ಆದರೆ ಇದಾದ ನಂತರ ಯಶ್ ಜೋಹರ್ ಅವರ ಐದು ಚಿತ್ರಗಳು ಒಂದರ ಹಿಂದೆ ಒಂದರಂತೆ ಸೋತಿದ್ದವು. ಇದರಿಂದಾಗಿ ಅವರ ಸ್ಥಿತಿ ತೀರಾ ಹದಗೆಟ್ಟಿತ್ತು.
“ನಾವು ಮಧ್ಯಮ ವರ್ಗದ ಜನರು”
ಕರಣ್ ತಮ್ಮ ಸಂದರ್ಶನದಲ್ಲಿ, “ಮೊದಲ ಚಿತ್ರ ಸೋತಾಗ, ನನ್ನ ತಾಯಿ ಹಿರೂ ಜೋಹರ್ ನನ್ನ ಅಜ್ಜಿಯ ಮನೆಯನ್ನು ಮಾರಿದರು. ಎರಡನೇ ಚಿತ್ರ ವಿಫಲವಾದಾಗ ತನ್ನ ಆಭರಣಗಳನ್ನು ಮಾರಿದರು. ನನ್ನ ತಂದೆ ದೆಹಲಿಯಲ್ಲಿ ಆಸ್ತಿಯನ್ನು ಹೊಂದಿದ್ದರು, ನಂತರ ಅದನ್ನು ಮಾರಾಟ ಮಾಡಬೇಕಾಯಿತು. ನಾನು ಈ ಎಲ್ಲಾ ಕಥೆಗಳನ್ನು ಕೇಳಿದ್ದೇನೆ ಮತ್ತು ನನ್ನ ಸ್ವಂತ ಕಣ್ಣುಗಳಿಂದ ಮನೆಯಲ್ಲಿ ಇದನ್ನು ನೋಡಿದ್ದೇನೆ. ನಮ್ಮ ಬಳಿ ಹಣವಿರಲಿಲ್ಲ. ನಾವು ಮಧ್ಯಮ ವರ್ಗದ ಜನರು. ಕ್ರಮೇಣ ಮೇಲ್ಮಧ್ಯಮ ವರ್ಗದವರಾಗಿ ಈಗ ಶ್ರೀಮಂತರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಈಗ ನಿವ್ವಳ ಮೌಲ್ಯ 1700 ಕೋಟಿ ರೂ
ಪ್ರಸ್ತುತ ಕರಣ್ ಜೋಹರ್ ಮಲಬಾರ್ ಹಿಲ್ಸ್ ನಲ್ಲಿ 20 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಇದಲ್ಲದೇ ಮುಂಬೈನ ಕಾರ್ಟರ್ ರಸ್ತೆಯಲ್ಲಿ ಸಮುದ್ರಕ್ಕೆ ಮುಖಮಾಡಿದ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ. ಇದರ ಬೆಲೆ 32 ಕೋಟಿ ರೂ. ಕರಣ್ ಅವರು BMW 745, BMW 760 ಮತ್ತು ಮರ್ಸಿಡಿಸ್ S ಕ್ಲಾಸ್‌ನಂತಹ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಅವರ ಒಟ್ಟು ಆಸ್ತಿ 1700 ಕೋಟಿ ರೂ.