ಇಂದು ಅಕ್ಟೋಬರ್ 2 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಗಾಂಧಿ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಗಾಂಧೀಜಿಯವರು ಗುಜರಾತ್‌ನ ಪೋರಬಂದರ್‌ನಲ್ಲಿ ಅಕ್ಟೋಬರ್ 2, 1869 ರಂದು ಜನಿಸಿದರು. ಭಾರತದ ಸ್ವಾತಂತ್ರ್ಯದಲ್ಲಿ ಮಹಾತ್ಮ ಗಾಂಧೀಜಿಯವರ ಕೊಡುಗೆ ಅಪಾರ.
ಗಾಂಧೀಜಿ ಅವರ ಹೇಳಿಕೆಗಳು ಭಾರತದ ಅನೇಕ ಜನರ ಮೇಲೆ ಇಂದಿಗೂ ಪ್ರಭಾವ ಬೀರಿವೆ. ದೇಶದ ಜನರಿಗೆ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿದ ಅವರು ತಮ್ಮ ಜೀವನದಲ್ಲಿ ಇಂತಹ ಅನೇಕ ಭಾಷಣಗಳನ್ನು ಮಾಡಿದ್ದಾರೆ. ಅವರ ಭಾಷಣಗಳು ಅನೇಕ ಚಳುವಳಿಗಳನ್ನು ಹುಟ್ಟುಹಾಕಿದವು. ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ಇಂದು ನಾವು ನಿಮಗೆ ಬಾಪು ಅವರ ಅತ್ಯಂತ ಶಕ್ತಿಶಾಲಿ ಭಾಷಣದ ಬಗ್ಗೆ ಹೇಳಲಿದ್ದೇವೆ. ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮಾಡಿದ ಈ ಭಾಷಣದಲ್ಲಿ ಏನಿತ್ತು ಎಂಬುದನ್ನು ನೋಡೋಣ ಬನ್ನಿ….
1947 ರಲ್ಲಿ ಜೂನ್‌ನಲ್ಲಿ ಮಾಡಿದ ಭಾಷಣ
ನಾವೆಲ್ಲರೂ ಓದಿರುವ ಹಾಗೆ ಜೂನ್ 3, 1947 ರಂದು ಲಾರ್ಡ್ ಮೌಂಟ್ ಬ್ಯಾಟನ್ ಔಪಚಾರಿಕವಾಗಿ ಭಾರತದ ಸ್ವಾತಂತ್ರ್ಯವನ್ನು ಘೋಷಿಸಿದರು ಮತ್ತು ಭಾರತದ ವಿಭಜನೆಯನ್ನು ಸಹ ಘೋಷಿಸಿದರು. ಈ ದಿನವನ್ನು ಮೌಂಟ್ ಬ್ಯಾಟನ್ ಯೋಜನೆ ಎಂದೂ ಕರೆಯುತ್ತಾರೆ. ಅದಕ್ಕೂ ಮುನ್ನ 1947ರ ಜೂನ್ 1ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದೇಶದ ಎಲ್ಲ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಅವರು ಭಾರತದ ಸ್ವಾತಂತ್ರ್ಯದ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಮಾತನಾಡಿದ್ದರು. ಹಾಗಾದರೆ ಬಾಪು ಅವರು ಆ ಭಾಷಣದಲ್ಲಿ ಹೇಳಿದ್ದೇನು ಗೊತ್ತಾ?
ಗಾಂಧೀಜಿ ಮಾತನಾಡಿರುವ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ
ರಾಷ್ಟ್ರಪಿತ ಬಿರುದು ನೀಡಿದವರು ಯಾರು?
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಹಾತ್ಮ ಗಾಂಧೀಜಿ ಅವರಿಗೆ ರಾಷ್ಟ್ರಪಿತ ಎಂಬ ಬಿರುದನ್ನು ನೀಡಿದರು. ಅಂದಿನಿಂದ ಇಡೀ ದೇಶ ಅವರನ್ನು ರಾಷ್ಟ್ರಪಿತ ಎಂದು ಕರೆಯಲು ಆರಂಭಿಸಿತು. 1944 ರಲ್ಲಿ, ಸಿಂಗಾಪುರದಿಂದ ರೇಡಿಯೋ ಮೂಲಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಹಾತ್ಮಾ ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಸಂಬೋಧಿಸಿದ್ದರು. ಇದು ನೇತಾಜಿಯವರಿಗೆ ಬಾಪು ಅವರ ಮೇಲಿದ್ದ ಆಳವಾದ ಗೌರವ ಮತ್ತು ಪ್ರೀತಿ ತೋರಿಸುತ್ತದೆ.