Success story: “ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು…” ಅಣ್ಣಾವ್ರ ಈ ಹಾಡನ್ನು ಯಾರು ತಾನೇ ಕೇಳಿಲ್ಲ. ಇಂದಿಗೂ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಈ ಹಾಡು. ಆದರೆ ನಾವು ಈಗ ಹೇಳಲು ಹೊರಟಿರುವ ಸ್ಟೋರಿಯಲ್ಲಿ ಮಹಿಳೆಯೊಬ್ಬರು ಈ ಹಾಡನ್ನು ಕೇಳಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಈ ಹಾಡಿನಲ್ಲಿ ಬರುವ ಸಾಲಿನಂತೆ ನಡೆದುಕೊಂಡಿದ್ದಾರೆ.
ಹೌದು, ಈ ಹೆಣ್ಮಗಳ ಕಥೆ ಎಂಥವರಿಗೂ ಸ್ಪೂರ್ತಿಯಾಗಬಲ್ಲದು. ಆಕೆಯ ಊರು ಮೀರತ್ನ ರಾಲಿ ಚೌಹಾನ್ ಗ್ರಾಮ. ಹೆಸರು ಸೋನಿಕಾ. ಇವರು ತಮ್ಮ ಕಠಿಣ ಪರಿಶ್ರಮದಿಂದ ಇಡೀ ಗ್ರಾಮಕ್ಕೆ ಸ್ಫೂರ್ತಿಯಾಗಿದ್ದಾರೆ. ಸೋನಿಕಾ ಕೇವಲ 25 ಸಾವಿರ ರೂ.ನಿಂದ ಕೆಲಸ ಆರಂಭಿಸಿ ಕೇವಲ ಒಂದೂವರೆ ವರ್ಷದಲ್ಲಿ 12 ಲಕ್ಷ ರೂ.ಗಳಿಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಆದರೆ, ಸೋನಿಕಾ ಈ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ.
ಸೋನಿಕಾ ಅವರ ಪತಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಗಳಿಕೆ ತುಂಬಾ ಕಡಿಮೆಯಿತ್ತು. ಕೆಲವೊಮ್ಮೆ ಕೆಲಸ ಇರುತ್ತಿತ್ತು, ಆದರೆ ಕೆಲವೊಮ್ಮೆ ಕೆಲಸವೇ ಇರುತ್ತಿರಲಿಲ್ಲ. ಕುಟುಂಬದ ಖರ್ಚು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಇದಾದ ನಂತರ ಸೋನಿಕಾ ಪೊರಕೆ ಮಾಡಲು ಕಲಿತರು. ಮನೆಯಲ್ಲಿ ಪೊರಕೆಗಳನ್ನು ಮಾಡಲು ಪ್ರಾರಂಭಿಸಿದರು. ಕ್ರಮೇಣ ಅವರ ಶ್ರಮಕ್ಕೆ ಫಲ ಸಿಕ್ಕಿತು. ಅವರು ತಯಾರಿಸಿದ ಪೊರಕೆಗಳಿಗೆ ಬೇಡಿಕೆ ಹೆಚ್ಚತೊಡಗಿತು. ಪೊರಕೆ ವ್ಯಾಪಾರ ಅವರ ಬಡತನವನ್ನು ಹೋಗಲಾಡಿಸಿತು. ಹಾಗಾದರೆ ಬನ್ನಿ, ಇಲ್ಲಿ ಸೋನಿಕಾ ಅವರ ಪ್ರಯಾಣದ ಬಗ್ಗೆ ತಿಳಿಯೋಣ.
Read also: 5 ಸಾವಿರ ಹೂಡಿಕೆ ಮಾಡಿ ಇಂದು ಪ್ರತಿ ತಿಂಗಳು ₹ 5 ಲಕ್ಷ ಸಂಪಾದಿಸುತ್ತಿರುವ ಯುವಕ
ಸಾಲ ಮಾಡಿ ಉದ್ಯಮ ಆರಂಭಿಸಿದ ಸೋನಿಕಾ
ಸೋನಿಕಾ ಕುಟುಂಬ ಆರ್ಥಿಕ ಸಂಕಷ್ಟದಿಂದ ಬಳಲುತ್ತಿತ್ತು. ಪತಿ ಸಂಪಾದನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಸಂಸಾರ ನಡೆಸುವುದು ಸೋನಿಕಾಗೆ ಸವಾಲಿನ ಕೆಲಸವಾಗಿತ್ತು. ಆದ್ದರಿಂದ ಅವರ ಕುಟುಂಬದ ಒಪ್ಪಿಗೆಯೊಂದಿಗೆ, ಜೈಲ್ ಚುಂಗಿಯಲ್ಲಿರುವ ಕೆನರಾ ಆರ್ಎಸ್ಇಟಿಐನಿಂದ ಪೊರಕೆ ತಯಾರಿಕೆಯ ಕುರಿತು 6 ದಿನಗಳ ತರಬೇತಿ ಪಡೆದರು. ತರಬೇತಿ ನಂತರವೇ ಸೋನಿಕಾ 25 ಸಾವಿರ ಸಾಲ ಮಾಡಿ ಪೊರಕೆ ತಯಾರಿಸುವ ಉದ್ಯಮ ಆರಂಭಿಸಿದ್ದರು.
ಹೆಚ್ಚಾಯ್ತು ಆರ್ಡರ್ಗಳು
ಅಂಗಡಿಯವರಿಗೆ ಸೋನಿಕಾ ಮಾಡಿದ ಪೊರಕೆಗಳು ತುಂಬಾ ಇಷ್ಟವಾಗಿದ್ದವು. ಅವುಗಳನ್ನು ಖರೀದಿಸಲು ಪ್ರಾರಂಭಿಸಿದರು. ಆರ್ಡರ್ಗಳು ಹೆಚ್ಚಾದಾಗ, ಸೋನಿಕಾ ತನ್ನ ಪತಿ ಮತ್ತು ಹಳ್ಳಿಯ ಕೆಲವು ಮಹಿಳೆಯರನ್ನೂ ತನ್ನೊಂದಿಗೆ ಸೇರಿಸಿಕೊಂಡರು. ಇಂದು ಅನೇಕ ಮಹಿಳೆಯರು ಸೋನಿಕಾ ಅವರೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಸ್ವಾವಲಂಬಿಗಳಾಗಿದ್ದಾರೆ. ಜನರು ಸೋನಿಕಾ ಮತ್ತು ಅವರ ಕುಟುಂಬವನ್ನು ಅನೇಕ ಬಾರಿ ಗೇಲಿ ಮಾಡಿದರು. ಆದರೆ, ಸೋನಿಕಾ ಯಾವತ್ತೂ ಛಲ ಬಿಡಲಿಲ್ಲ ಮತ್ತು ಧೈರ್ಯದಿಂದ ಕೆಲಸ ಮಾಡಿದರು.
ಪ್ರಸ್ತುತ ಆದಾಯವೆಷ್ಟಿದೆ?
ಈ ಹಿಂದೆ ಸೋನಿಕಾ ಕೆಲವು ಪೊರಕೆಗಳೊಂದಿಗೆ ಮಾರುಕಟ್ಟೆಗೆ ಮಾರಾಟ ಮಾಡಲು ಹೋಗುತ್ತಿದ್ದರು. ಆದರೆ ಇಂದು ಅವರು ಟ್ರಕ್ನಲ್ಲಿ ಸರಕುಗಳನ್ನು ಪೂರೈಸುತ್ತಾರೆ. ಅವರ ಪೊರಕೆಗಳನ್ನು ದೆಹಲಿಯಲ್ಲೂ ಮಾರಾಟ ಮಾಡಲಾಗುತ್ತದೆ. ಸೋನಿಕಾ ಅವರ ಪತಿ ಈಗ ಮಾರ್ಕೆಟಿಂಗ್ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ, ಸೋನಿಕಾ ಎಲ್ಲಾ ಖರ್ಚು ಮತ್ತು ವೇತನ ನೋಡಿಕೊಂಡು ಸುಮಾರು 50 ಸಾವಿರ ರೂ.ಉಳಿಸುತ್ತಾರೆ. ಅವರ ವಹಿವಾಟು ಸುಮಾರು 10 ರಿಂದ 12 ಲಕ್ಷ ರೂಗೆ ಏರಿಕೆಯಾಗಿದೆ. ತರಬೇತಿ ಪಡೆದ ಮಹಿಳೆಯರಿಗೆ ಸೋನಿಕಾ ಪ್ರತಿದಿನ ಸುಮಾರು 800 ರಿಂದ 1000 ರೂಪಾಯಿಗಳನ್ನು ನೀಡುತ್ತಾರೆ. ಅದೇ ರೀತಿ ತರಬೇತಿ ಪಡೆಯದ ಮಹಿಳೆಯರು ಮತ್ತು ಹುಡುಗಿಯರಿಗೆ ನಾಲ್ಕು ನೂರರಿಂದ ಐದು ನೂರು ರೂ. ನೀಡುತ್ತಾರೆ.
ಯಶಸ್ಸಿಗೆ ಮುಖ್ಯ ಕಾರಣವೆಂದರೆ…
ಇದಲ್ಲದೇ ಮೀರತ್ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತರಬೇತಿ ನೀಡಲು ಸೋನಿಕಾ ಹೋಗುತ್ತಾರೆ. ಇಂದು ಅವರು ಗ್ರಾಮದ ಮಹಿಳೆಯರು ಮತ್ತು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಅವರ ಕಥೆ ತೋರಿಸುತ್ತದೆ. ಸೋನಿಕಾ ಅವರ ಯಶಸ್ಸಿಗೆ ಮುಖ್ಯ ಕಾರಣವೆಂದರೆ ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ತನ್ನ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು. ಅವರು ಯಾವಾಗಲೂ ಉತ್ತಮ ಗುಣಮಟ್ಟದ ಪೊರಕೆಗಳನ್ನು ಮಾಡುವತ್ತ ಗಮನ ಹರಿಸಿರುವುದು…